CHILD DEVELOPMENT AND PEDAGOGY
(ಶಿಶುವಿಕಾಸ ಮತ್ತು ಬೋಧನಾಶಾಸ್ತ್ರ)
PRACTICE PAPERS
PRACTICE PAPER 1
1. ಮಗುವಿನಲ್ಲಿ ವಿಕಾಸದ ಬೆಳವಣಿಗೆಗಳು ಕಂಡು ಬರಲು ಕಾರಣ
1) ಆನುವಂಶೀಯ ಕಾರಣಗಳು
2) ಪರಿಸರದ ಅಂಶಗಳು
3) ಆನುವಂಶೀಯ ಮತ್ತು ಪರಿಸರದ ಅಂಶಗಳ ಅಂತರ್ ಕ್ರಿಯೆ
4) ಪೌಷ್ಟಿಕ ಅಂಶಗಳು
2. ಪಿಯಾಜೆಯವರ ಪ್ರಕಾರ ಜ್ಞಾನಾತ್ಮಕ ವಿಕಾಸದ ಪ್ರಕ್ರಿಯೆಯಲ್ಲಿ ಪ್ರಕಲನೆ ರೂಪಿಸುವ ಮತ್ತು ಪ್ರಯೋಗ ಮಾಡುವ ಸಾಮರ್ಥ್ಯ ಇಲ್ಲಿ ಕಾಣಬರುತ್ತದೆ.
1) ಸಂವೇದನಾ ಗತಿ ಹಂತ
2) ಮೂರ್ತ ಕಾರ್ಯಗಳ ಹಂತ
3) ಔಪಚಾರಿಕ ಕಾರ್ಯಗಳ ಹಂತ
4) ಕಾರ್ಯ ಪೂರ್ವ ಹಂತ
3. ಬೌದ್ಧಿಕ ಕೊರತೆ ಕಂಡು ಬರುವ ಬುದ್ಧಿಶಕ್ತಿ ಸೂಚ್ಯಂಕದ ವ್ಯಾಪ್ತಿ
1) 0 – 25
2) 0 – 30
3) 25 – 50
4) 0 – 70
4. ಬುದ್ಧಿಶಕ್ತಿಯ ಮೂರು ಆಯಾಮಗಳ ಮಾದರಿಯನ್ನು ರೂಪಿಸಿದವರು
1) ಕೆಟಲ್
2) ಥರ್ಸ್ಫೋನ್
3) ಗಿಲ್ ಪೋರ್ಡ್
4) ಟರ್ಮನ್
5. ಬುದ್ಧಿಶಕ್ತಿ ಎನ್ನುವುದು
1) ಭಾವನಾತ್ಮಕ ಸಾಮರ್ಥ್ಯ
2) ಆಲೋಚನಾ ಸಾಮರ್ಥ್ಯ
3) ಜ್ಞಾನಾತ್ಮಕ ಸಾಮರ್ಥ್ಯ
4) ಚಾಲನಾ ಸಾಮರ್ಥ್ಯ
6. ಒಬ್ಬ ಬುದ್ಧಿಮಾಂದ್ಯ ಮಗುವಿನ ಅವಧಾನ ಅವಧಿಯು ಕಡಿಮೆ ಇರುತ್ತದೆ. ಏಕೆಂದರೆ
1) ಮಗುವನ್ನು ಗಮನಿಸಲು ಶಿಕ್ಷಕರಿಗೆ ಸ್ವಲ್ಪ ಸಮಯ ಲಭ್ಯವಿರುವುದು
2) ಮಗು ಬಹಳ ತುಂಟನಾಗಿರುವುದು
3) ಅವನ ಸ್ನೇಹಿತರು ಅಡ್ಡಿ ವಹಿಸುವರು
4) ಹುಟ್ಟಿನಿಂದ ಬಂದ ಗುಣಗಳು
7. ಒಳನೋಟ ಕಲಿಕೆಯ ಮುಖ್ಯವಾದ ಗುಣಲಕ್ಷಣವು
1) ತಕ್ಷಣ ವಿಚಾರ ಹೊಳೆಯುವುದು
2) ಸ್ವಯಂ ಕಲಿಕೆ
3) ಸಂಕಷ್ಟ ಪರಿಹರಿಸುವುದು
4) ದೃಷ್ಟಿಕೋನ ವೃದ್ಧಿಪಡಿಸುವುದು
8.ಪ್ರತಿಭಾವಂತ ಮಕ್ಕಳು ಯಾವಾಗಲೂ ಎದುರು ನೋಡುವುದು
1) ಪ್ರಯೋಗಾಲಯಗಳಲ್ಲಿ ಕೆಲಸ ಮಾಡುವುದು
2) ಗ್ರಂಥಾಲಯಗಳಲ್ಲಿ ಅಭ್ಯಸಿಸುವುದು
3) ಇತರರನ್ನು ಗೆಲ್ಲಲು ಅವಕಾಶಗಳು
4) ವಿನೂತನ ಕಾರ್ಯಗಳು
9.ಒಬ್ಬ ಹುಡುಗನ ಮಾನಸಿಕ ವಯಸ್ಸು (M.A.)8 ಹಾಗೂ ದೈಹಿಕ ವಯಸ್ಸು (C.A.) 10 ಆಗಿದ್ದರೆ ಆತನ ಬುದ್ದಿ ಸೂಚ್ಯಂಕವು (IQ) ಎಷ್ಟು
1) 125
2) 100
3) 80
4) 120
10. ಒಬ್ಬ ಬಾಲಕಿ ಸಂಗೀತದಲ್ಲಿ ಪ್ರಾವೀಣ್ಯ ಪಡೆಯುವುದು ಇದಕ್ಕೆ ಉದಾಹರಣೆಯಾಗಿದೆ.
1) ಧನಾತ್ಮಕ ಮನೋಭಾವ
2) ಕುತೂಹಲ
3) ಆಂತರಿಕ ಅಭಿಪ್ರೇರಣೆ
4) ಆಸಕ್ತಿ
11. ಭಾಷಾ ಬೆಳವಣಿಗೆಯಲ್ಲಿ ಮೌಖಿಕ ಅಭಿವ್ಯಕ್ತಿ ಮತ್ತು ಒತ್ತು ಕೊಡುವಿಕೆಯ ಅಂಶಗಳನ್ನು ಈ ಮೂಲಕ ಗಳಿಸಬಹುದಾಗಿದೆ.
1) ಒಗ್ಗೂಡಿಸುವಿಕೆ
2) ಒಳನೋಟ
3) ಅನುಬಂಧಿತತೆ
4) ಅನುಕರಣೆ
12. ಅಭ್ಯಾಸ ನಿಯಮದಲ್ಲಿ ಇತರ ವಸ್ತುಗಳು ಸಮನಾಗಿದ್ದು ಎಂಬ ನುಡಿಗಟ್ಟು ಇವುಗಳಿಗೆ ಸಂಬಂಧಪಟ್ಟಿದೆ.
1) ಪರಿಣಾಮ ಮತ್ತು ಸಿದ್ದತೆ
2) ಉಪಯೋಗ ಮತ್ತು ನಿರುಪಯೋಗ
3) ತಾಜಾ ಮತ್ತು ತೀವ್ರ
4) ಪ್ರಚೋದನೆ ಮತ್ತು ಪ್ರತಿಕ್ರಿಯೆ
13. ಪರಿಣಾಮ ನಿಯಮವು ಒತ್ತಿ ಹೇಳುವುದು
1) ಬಹುಮಾನಗಳನ್ನು ಮಾತ್ರ
2) ಶಿಕ್ಷೆಗಳನ್ನು ಮಾತ್ರ
3) ಬಹುಮಾನ ಮತ್ತು ಶಿಕ್ಷೆ ಎರಡನ್ನೂ
4) ಬಹುಮಾನ ಮತ್ತು ಶಿಕ್ಷೆಎರಡೂ ಅಲ್ಲ
14. ಮಾನಸಿಕ ಕೌಶಲ್ಯ ಮತ್ತು ತಿಳಿವಳಿಕೆಯ ಪರೀಕ್ಷೆಯನ್ನು ಮಾಡುವಲ್ಲಿ ಮೌಲಿಕವಾದ ಪರೀಕ್ಷೆ
1) ಬಹು ಆಯ್ಕೆ ಮಾದರಿ ಪರೀಕ್ಷೆಗಳು
2) ಹೊಂದಿಸಿ ಬರೆಯುವ ಪರೀಕ್ಷೆಗಳು
3) ಪ್ರಬಂಧ ಮಾದರಿ ಪರೀಕ್ಷೆಗಳು
4) ಪೂರ್ಣಗೊಳಿಸುವ ಮಾದರಿ ಪರೀಕ್ಷೆಗಳು
15. ವಸ್ತುನಿಷ್ಠ ಮಾದರಿ ಪರೀಕ್ಷೆಗಳು ಲಘು ಮಾದರಿ ಪರೀಕೆಗಳಿಗಿಂತ ಹೆಚ್ಚು ಆದ್ಯತೆ ಪಡೆದಿವೆ. ಏಕೆಂದರೆ
1) ವ್ಯಕ್ತಿನಿಷ್ಠತೆಯನ್ನು ಕಡಿಮೆ ಮಾಡುತ್ತವೆ
2) ರಚನೆ ಮಾಡುವಲ್ಲಿ ಸುಲಭವಾಗಿವೆ
3) ವಿದ್ಯಾರ್ಥಿಗಳು ಇಷ್ಟಪಡುತ್ತಾರೆ
4) ಸುಲಭವಾಗಿ ಹೆಚ್ಚು ಅಂಕ ಗಳಿಸಬಹುದು
16. ಒಬ್ಬ ವ್ಯಕ್ತಿ ತನ್ನ ನ್ಯೂನತೆಗಳನ್ನು ಇತರರ ಮೇಲೆ ವರ್ಗಾಯಿಸಲು ಪ್ರಯತ್ನಿಸುವ ತಂತ್ರ
1) ದಮನ
2) ಹಗಲುಗನಸು ಕಾಣುವಿಕೆ
3) ಪ್ರಕ್ಷೇಪಣೆ
4) ತರ್ಕ ಸಮ್ಮತವಾಗಿಸುವಿಕೆ
17. ಕಾರ್ಯಸರಣಿ ಬೋಧನೆಯು ಈ ತತ್ವಗಳನ್ನು ಅನ್ವಯಿಸಿ ರೂಪಿಸಲ್ಪಟ್ಟಿದೆ.
1) ಪ್ರಯತ್ನ ಮತ್ತು ಪ್ರಮಾದ ಕಲಿಕೆ
2) ಸೋಪಾಧಿಕ ಅನುಬಂಧಿತ ಕಲಿಕೆ
3) ಕ್ರಿಯಾಜನ್ಯ ಕಲಿಕೆ
4) ಒಳನೋಟ ಕಲಿಕೆ
18. ಕಕ್ಷಿಕೇಂದ್ರಿತ ಆಪ್ತ ಸಲಹೆ ವಿಧಾನವು ಹೀಗೂ ಕರೆಯಲ್ಪಟ್ಟಿದೆ.
1) ನಿರ್ದೇಶಿತ ಆಪ್ತ ಸಲಹೆ
2) ಅನಿರ್ದೇಶಿತ ಆಪ್ತ ಸಲಹೆ
3) ಮಿಶ್ರ ಆಪ್ತ ಸಲಹೆ
4) ಗುಂಪು ಆಪ್ತ ಸಲಹೆ
19. ಒಬ್ಬ ಹುಡುಗಿ ಒಂದು ಪುಟ್ಟ ಕಥೆಯನ್ನು ಓದುತ್ತಾಳೆ. ಅವಳು ಅದನ್ನು ಓದಿದ ನಂತರ ಕಥೆಯ ಕೊನೆಯಲ್ಲಿ ನೀಡಿರುವ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸುತ್ತಾಳೆ ಮತ್ತು ಆ ಕಥೆಯ ಮುಕ್ತಾಯ ಬೇರೆಯ ರೀತಿಯಲ್ಲಿ ಇರಬೇಕಿತೆಂದು ಅಪೇಕಿಸುತ್ತಾಳೆ. ಇದು ವಿದ್ಯಾರ್ಥಿನಿಯ ಈ ವರ್ತನೆಯನ್ನು ತೋರಿಸುತ್ತದೆ.
1) ಕಥೆ ಓದುವುದರಲ್ಲಿ ಜಾಣತನ
2) ಸೃಜನಶೀಲತೆ
3) ತೆರೆದ ಮನಸ್ಸು
4) ಬುದಿವಂತಿಕೆ
20. ಒಬ್ಬ ಹುಡುಗ ಕಡಿಮೆ ಸಕೇಂದ್ರೀಕೃತ, ಕಡಿಮೆ ಆಕ್ರಮಣಕಾರಿ, ಕಡಿಮೆ ಸಾರ್ಥಿ ಮತ್ತು ಕಡಿಮೆ ಪರಾವಲಂಬಿ ಆದಾಗ ಆತನು ಈ ಬೆಳವಣಿಗೆಯನ್ನು ತಲುಪಿದಾನೆ ಎಂದು ತಿಳಿಯಬಹುದು.
1) ಭೌತಿಕ ಬೆಳವಣಿಗೆ
2) ಭಾವನಾತ್ಮಕ ಬೆಳವಣಿಗೆ
3) ಮಾನಸಿಕ ಬೆಳವಣಿಗೆ
4) ಸಾಮಾಜಿಕ ಬೆಳವಣಿಗೆ
21. ಒಂದು ಮಗು ಒಂದು ಚಮಚವನ್ನು ಹಿಡಿದುಕೊಳ್ಳುವುದನ್ನು ಕಲಿತಾಗ, ಆತನು ಮುಂದೆ ಅದೇ ರೀತಿಯ ಉದದ ಮತ್ತು ತೆಳುವಾದ ವಸ್ತುಗಳನ್ನು ಹಿಡಿದುಕೊಳ್ಳಬಲ್ಲ. ಇದು ಮುಂದಿನ ಕಲಿಕೆಗೆ
1) ಸ್ವಾಂಗೀಕರಣವಾಗುತ್ತದೆ
2) ಸ್ಥಳಾವಕಾಶವಾಗುತ್ತದೆ
3) ಸೀಮಾ (ಮಾನಸಿಕ ಚಿತ್ರಣ) ವಾಗುತ್ತದೆ
4) ಹೊಂದಾಣಿಕೆಯಾಗುತ್ತದೆ
22. ಕಲಿಕೆಯು ನಿಧಾನ ಗತಿಯಲ್ಲಿ ಸಾಗಿ ಅಂತಿಮವಾಗಿ ನಿಂತು ಹೋಗುವ ಮತ್ತೆ ಅದು ಮುಂದುವರಿಯುವ ಸಾಧ್ಯತೆ ಇಲ್ಲ ಎನಿಸುವ ಬಿಂದು .
1) ಸಮತಲ
2) ಆಸಕ್ತಿಯ ಕೊರತೆ
3) ಬೇಸರ
4) ಕಷ್ಟಕರ ಹಂತ
23. ಈ ಹಂತವನ್ನು ಕೂಟಯುಗ ಎಂದು ಕರೆಯುವರು.
1) ಶಾಲಾ ಪೂರ್ವ ಹಂತ
2) ಉತ್ತರ ಬಾಲ್ಯ ಹಂತ
3) ಅನ್ವೇಷಣಾ ಹಂತ
4) ಪ್ರಶ್ನಿಸುವ ಹಂತ
24. ಒಬ್ಬ ಶಿಕ್ಷಕನು ತನ್ನ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯವನ್ನು ಕಾಪಾಡಲು ಕೈಗೊಳ್ಳಬೇಕಾದ ಕ್ರಮ
1) ಆಗಾಗ ಪ್ರವಾಸ ಕೈಗೊಳ್ಳುವುದು
2) ವಿದ್ಯಾರ್ಥಿಗಳನ್ನು ಉನ್ನತ ಅಂಕ ಗಳಿಸುವಂತೆ ಪ್ರೋತ್ಸಾಹಿಸುವುದು
3) ಅನಾರೋಗ್ಯಕರ ಸ್ಪರ್ಧೆಗಳನ್ನು ತಡೆಗಟ್ಟುವುದು
4) ಸಹಪಠ್ಯ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಮಾಡುವುದು
25. ಒಬ್ಬ ಹುಡುಗಿ ಒಂದು ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬೇಕಾಗಿದೆ. ಆದರೆ ಆಕೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದನ್ನು ಬಿಟ್ಟು ಅಳಲು ಪ್ರಾರಂಭಿಸುತ್ತಾಳೆ. ಇದು ಸೂಚಿಸುವುದೇನೆಂದರೆ,
1) ಪಲಾಯನ
2) ಹೊಂದಾಣಿಕೆ
3) ಪ್ರತಿಗಮನ
4) ನಕಾರಾತ್ಮಕತೆ
26. ಪ್ರೇರಣೆಯ ಪರಿಕಲ್ಪನೆಯನ್ನು ಸೂಕ್ತವಾಗಿ ಹೀಗೆ ವ್ಯಾಖ್ಯಾನಿಸಲಾಗಿದೆ.
1) ಹೆಚ್ಚು ವಸ್ತುಗಳನ್ನು ನೆನಪಿನಲ್ಲಿಟ್ಟುಕೊಳ್ಳುವ ಸಾಮರ್ಥ್ಯ
2) ಹೆಚ್ಚು ಅಂಕಗಳನ್ನು ಗಳಿಸುವ ಸಾಮರ್ಥ್ಯ
3) ಮಾನ್ಯತೆ ಗಳಿಸುವ ಸಾಮರ್ಥ್ಯ
4) ಅವನಅವಳ ಗುರಿ ಸಾಧಿಸುವ ಸಾಮರ್ಥ್ಯ
27. ಶಿಕ್ಷಕರು ತನ್ನ ಮಕ್ಕಳನ್ನು ಗೃಹ ಕೈಗಾರಿಕಾ ಸ್ಥಳಕ್ಕೆ ಕರೆದುಕೊಂಡು ಹೋಗಿ ಅಲ್ಲಿ ನೇಯುವುದು, ಬುಟ್ಟಿ ಹೆಣೆಯುವುದು ಮತ್ತು ಆಟದ ಸಾಮಾನುಗಳನ್ನು ವೀಕ್ಷಿಸುತ್ತಾರೆ. ಶಿಕ್ಷಕರು ವಿದ್ಯಾರ್ಥಿಗಳ ವರ್ತನೆಯನ್ನು ಪರೀಕ್ಷಿಸುತ್ತಾರೆ. ಇದು ಇದಕ್ಕೆ ಉದಾಹರಣೆಯಾಗಿದೆ.
1) ಯಾದೃಚ್ಛಿಕ ಮೌಲ್ಯಮಾಪನ
2) ಮೌಲ್ಯಮಾಪನ
3) ಪರಿಮಾಣಾತ್ಮಕ ಮೌಲ್ಯಮಾಪನ
4) ಸಂಕಲನಾತ್ಮಕ ಮೌಲ್ಯಮಾಪನ
28. ತರಗತಿಯ ಪ್ರತಿ ಮಗುವಿಗೆ ವಿವಿಧ ಸನ್ನಿವೇಶಗಳಿರುವ ಕಾರ್ಡ್‌ಗಳನ್ನು ಕೊಡಲಾಗುತ್ತದೆ. ಪ್ರತಿ ಮಗುವೂ ಈ ಸನ್ನಿವೇಶವನ್ನು ಕುರಿತು ಕಥೆಯನ್ನು ಹೆಣೆಯಬೇಕಾಗುತ್ತದೆ ಮತ್ತು ಈ ಕಥೆಯನ್ನಾಧರಿಸಿ ಶಿಕ್ಷಕನು ವಿದ್ಯಾರ್ಥಿಯ ವರ್ತನೆಯನ್ನು ಅರ್ಥ ಮಾಡಿಕೊಳ್ಳುತ್ತಾನೆ. ಈ ತಂತ್ರವು
1) ಸಂದರ್ಶನ
2) ಪ್ರಕ್ಷೇಪಣಾ ತಂತ್ರ
3) ವೀಕ್ಷಣೆ
3) ಆಪ್ತಸಲಹೆ
29. ಸಂವೇಗ ಪ್ರತಿನಿಧಿಸುವುದು
1) ಕದಡು
2) ಪ್ರತಿಭಟಿಸು
4) ಬೆಳೆಸು
30. ಗುಂಪಿನಲ್ಲಿ ವ್ಯಕ್ತಿಯ ಸ್ಥಾನವನ್ನು ಅಳೆಯುವ ಸೂಕ್ತವಾದ ವಿಧಾನ
1) ಸಾಂದರ್ಭಿಕ ಪರೀಕ್ಷೆಗಳು
2) ಮಾನಸಿಕ ಪರೀಕ್ಷೆಗಳು
3) ಸಮಾಜಮಿತಿ ತಂತ್ರ
4) ಚಿಕಿತ್ಸಾ ಸಂದರ್ಶನಗಳು
ANSWERS
| 1 (3) | 2 (3) | 3 (4) | 4 (3) | 5 (3) | 6 (4) | 7 (1) | 8 (4) | 9 (3) | 10(3) |
| 11 (4) | 12 (1) | 13 (3) | 14 (1) | 15 (1) | 16 (3) | 17 (3) | 18 (2) | 19 (2) | 80 (4) |
| 21 (2) | 22 (1) | 23 (2) | 24 (3) | 25 (3) | 26 (4) | 27 (3) | 28 (2) | 29 (1) | 30 (3) |
No comments:
Post a Comment