Tuesday, August 21, 2018

Asian Games 2018: A brief summary of everyone who won the medal for India.

  DRx.Khanderay       Tuesday, August 21, 2018

Title :  Sport Current affairsGK notes


 File Type : Sport Current affairs notes


File Language : Kannada


Subject : Information


Place : India


Announcement Date : 2018-08-22


Subject Format : Text


Scanned Copy : Yes


Editable Text : NO


Password Protected : NO


Copy Text : NO


Quality : High


Subject Size Reduced : NO


Password : NO


Cost : Free


For Personal Use Only


🏅ಏಷ್ಯನ್ ಗೇಮ್ಸ್ 2018: ಭಾರತಕ್ಕೆ ಪದಕ ಗೆದ್ದ ಎಲ್ಲರ ಸಂಕ್ಷಿಪ್ತ ವಿವರ:-

Source:-Mikhel


⏺️.. ಜಕಾರ್ತಾ, ಆಗಸ್ಟ್ 21: ಇಂಡೋನೇಷ್ಯಾದ ಜಕಾರ್ತಾ ಮತ್ತು ಪಾಲೆಂಬಂಗ್ ನಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್ ನಲ್ಲಿ ಭಾರತ ವಿಶ್ವದ ಗಮನ ಸೆಳೆಯುತ್ತಿದೆ. ಶೂಟಿಂಗ್ ವಿಭಾಗದಲ್ಲಿ ಅಪೂರ್ವಿ ಚಾಂದೇಲ ಮತ್ತು ರವಿಕುಮಾರ್ ಜೋಡಿ 10 ಮೀ. ಏರ್ ರೈಫಲ್ ನಲ್ಲಿ ಕಂಚಿನೊಂದಿಗೆ ಭಾರತದ ಪದಕ ಖಾತೆ ತೆರೆದಿದ್ದರು.


⏺️..ಕ್ರೀಡಾ ಸ್ಪರ್ಧೆಗಳು ಆರಂಭಗೊಂಡ (ಆಗಸ್ಟ್ 19) ದಿನದಿಂದ ಹಿಡಿದು ಭಾರತ ಸಾಲು ಸಾಲು ಪದಕ ಗೆಲ್ಲುತ್ತಲೇ ಸಾಗಿತ್ತು. ಭಾರತದ ಬಜರಂಗ್ ಪೂನಿಯಾ ಅವರು ಪುರುಷರ 65 ಕೆಜಿ ಕುಸ್ತಿ ಫ್ರೀ ಸ್ಟೈಲ್ ನಲ್ಲಿ ಬಂಗಾರ ಗೆದ್ದು ಭಾರತಕ್ಕೆ ಚಿನ್ನದ ನಗು ಹಂಚಿದ್ದರು. ಅನಂತರವೂ ಭಾರತ ಪದಕ ಬೇಟೆ ಮುಂದುವರೆಸಿತ್ತು.


⏺️..ಸ್ಪರ್ಧೆ ಆರಂಭದ ದಿನ ಬಜರಂಗ್, ಮರುದಿನ ಕುಸ್ತಿಪಟು ವಿನೇಶ್ ಫೋಗಟ್, ಮೂರನೇ ದಿನ ಶೂಟರ್ ಸೌರಭ್ ಚೌಧರಿ ಚಿನ್ನ ಗೆದ್ದು ಭಾರತ ಮಿಂಚುವಂತೆ ನೋಡಿಕೊಂಡಿದ್ದರು. ಆಗಸ್ಟ್ 18ರಿಂದ ಆರಂಭಗೊಂಡು ಸೆಪ್ಟೆಂಬರ್ 2ರ ವರೆಗೆ ನಡೆಯಲಿರುವ ಈ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಪದಕ ಪಟ್ಟಿ ಬೆಳೆಸಿದವರ ಸಂಪೂರ್ಣ ವಿವರವಿದೆ. ಪದಕ ಸೇರ್ಪಡೆಗೊಂಡಂತೆ ಅಪ್ ಡೇಟ್ ಮಾಡುತ್ತಿದ್ದೇವೆ.




1. ಅಪೂರ್ವಿ ಚಂದೇಲಾ ಮತ್ತು ರವಿಕುಮಾರ್..


⏺️ಮಿಕ್ಸ್ಡ ಟೀಮ್ ಶೂಟಿಂಗ್ ಸ್ಪರ್ಧೆಯಲ್ಲಿ ಭಾರತದ ಅಪೂರ್ವಿ ಚಂದೇಲಾ ಮತ್ತು ರವಿಕುಮಾರ್ ಜೋಡಿಗೆ ಕಂಚು ಒಲಿದಿತ್ತು. ಇದು ಭಾರತಕ್ಕೆ ಏಷ್ಯನ್ ಗೇಮ್ಸ್ 2018ರಲ್ಲಿ ಲಭಿಸಿದ ಮೊದಲ ಪದಕ. 10 ಮೀ. ಏರ್ ರೈಫಲ್ ಸ್ಪರ್ಧೆಯಲ್ಲಿ ಭಾರತದ ಜೋಡಿ ಕಂಚು ಗೆದ್ದಿತ್ತು.



2. ಬಜರಂಗ್ ಪೂನಿಯಾ

ಕುಸ್ತಿಪಟು ಬಜರಂಗ್ ಪೂನಿಯಾ ಅವರು ಭಾರತ ಪರ ಮೊದಲ ಚಿನ್ನ ಗೆದ್ದಿದ್ದರು. ಪುರುಷರ 65 ಕೆಜಿ ಕುಸ್ತಿ ಫ್ರೀ ಸ್ಟೈಲ್ ವಿಭಾಗದಲ್ಲಿ ಸ್ಪರ್ಧಿಸಿದ್ದ ಅವರು ಚೀನಾದ ತಕಾತನಿ ಡೈಚಿ ಅವರನ್ನು ಮಣಿಸಿ ಚಿನ್ನಕ್ಕೆ ಕೊರಳೊಡ್ಡಿದರು.


3. ದೀಪಕ್ ಕುಮಾರ್


ಏಷ್ಯನ್ ಗೇಮ್ಸ್ ನ 10 ಮೀ.ಏರ್ ರೈಫಲ್ ಶೂಟಿಂಗ್ ಸ್ಪರ್ಧೆಯಲ್ಲಿ ಭಾರತದ ದೀಪಕ್ ಕುಮಾರ್ ರಜತ ಪದಕ ಗೆದ್ದಿದ್ದಾರೆ. ಫೈನಲ್ ಸ್ಪರ್ಧೆಯಲ್ಲಿ 247.7 ಅಂಕ ಪಡೆಯುವ ಮೂಲಕ ದೀಪಕ್ ರಜತ ಪದಕ ಜಯಿಸಿದ್ದರು.



4. ವಿನೇಶ್ ಫೋಗಟ್


ಏಷ್ಯನ್ ಗೇಮ್ಸ್ ಮಹಿಳಾ 50 ಕೆಜಿ ಕುಸ್ತಿ ಫ್ರೀ ಸ್ಟೈಲ್ ಸ್ಪರ್ಧೆಯಲ್ಲಿ ವಿನೇಶ್ ಫೋಗಟ್ ಭಾರತಕ್ಕೆ ಚಿನ್ನ ಗೆದ್ದಿದ್ದರು. ಜಪಾನ್ ಕುಸ್ತಿಪಟು ಸನ್ ಯಾನನ್ ಎದುರು ವಿನೇಶ್ ಚಿನ್ನ ಗೆಲ್ಲುವ ಮೂಲಕ ಭಾರತ ಪರ ಏಷ್ಯನ್ ಗೇಮ್ಸ್ ರಸ್ಲಿಂಗ್ ನಲ್ಲಿ ಚಿನ್ನ ಗೆದ್ದ ಮೊದಲ ಮಹಿಳೆಯಾಗಿ ಇತಿಹಾಸ ನಿರ್ಮಿಸಿದ್ದಾರೆ.



5. ಲಕ್ಷಯ್ ಶಿಯೊರಾನ್


ಶೂಟಿಂಗ್ ವಿಭಾಗದಲ್ಲಿ ಭಾರತಕ್ಕೆ ಮತ್ತೊಂದು ಬೆಳ್ಳಿ ಪದಕ ಲಭಿಸಿದ್ದು ಲಕ್ಷಯ್ ಅವರಿಂದ. ಪುರುಷರ ಟ್ರ್ಯಾಪ್ ವಿಭಾಗದಲ್ಲಿ ಲಕ್ಷಯ್ ಶಿಯೊರಾನ್ ಬೆಳ್ಳಿ ಗೆಲ್ಲುವ ಮೂಲಕ ಭಾರತದ ಪದಕ ಪಟ್ಟಿ ಬೆಳೆಸಿದ್ದರು.



6. ಸೌರಭ್ ಚೌಧರಿ ಮತ್ತು ಅಭಿಷೇಕ್ ವರ್ಮಾ


10 ಮೀ.ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾರತದ ಸೌರಭ್ ಚೌಧರಿ ಚಿನ್ನ ಗೆದ್ದಿದ್ದರು. 16ರ ಹರೆಯದ ಸೌರಭ್ ಏಷ್ಯನ್ ಗೇಮ್ಸ್ ನಲ್ಲಿ ಭಾರತ ಪರ ಚಿನ್ನ ಗೆದ್ದು ದಾಖಲೆ ನಿರ್ಮಿಸಿದ್ದರು. ಇದೇ ವಿಭಾಗದಲ್ಲಿ ಭಾರತದ ಅಭಿಷೇಕ್ ವರ್ಮಾ ಅವರಿಗೆ ಕಂಚಿನ ಪದಕ ಲಭಿಸಿತ್ತು.



7. ಸಂಜೀವ್ ರಜಪೂತ್


ಶೂಟರ್ ಸಂಜೀವ್ ರಜಪೂತ್ ಅವರು ಬೆಳ್ಳಿ ಪದಕ ಗೆದ್ದಿದ್ದರು. ಪುರುಷರ 50 ಮೀಟರ್ 3 ಪೊಸಿಷನ್ ರೈಫಲ್ ಶೂಟಿಂಗ್ ವಿಭಾಗದಲ್ಲಿ ಭಾಗವಹಿಸಿದ್ದ ಸಂಜೀವ್ ಅವರು ಕೇವಲ 0.4 ಮಿಮೀ ಅಂತರದಲ್ಲಿ ಚಿನ್ನದ ಪದಕ ವಂಚಿತರಾಗಿದ್ದರು.



8. ಪುರುಷರ ಸೆಪಕ್ ಟಾಕ್ರಾ ತಂಡ


ಕಿಕ್ ವಾಲಿಬಾಲ್ ಎಂದು ಕರೆಯಲಾಗುವ ಸೆಪಕ್ ಟಾಕ್ರಾದಲ್ಲಿ ಭಾರತ ಮೊಟ್ಟ ಮೊದಲ ಪದಕ ಕಂಚು ಜಯಿಸಿತ್ತು. ಪುರುಷರ ಟೀಮ್ ರೆಗು ಸೆಮಿಫೈನಲ್ ಪಂದ್ಯದಲ್ಲಿ ಭಾರತ, ಥಾಯ್ಲೆಂಡ್ ವಿರುದ್ಧ 0-2 ರಿಂದ ಸೋಲು ಅನುಭವಿಸಿ ಕಂಚಿನ ಪದಕಕ್ಕೆ ತೃಪ್ತಿ ಪಡೆದುಕೊಂಡಿತ್ತು.



9. ದಿವ್ಯಾ ಕಕ್ರನ್


ಮಹಿಳಾ ಕುಸ್ತಿಪಟು ದಿವ್ಯಾ ಕಕ್ರನ್ ಅವರು 68 ಕೆಜಿ ಫ್ರೀ-ಸ್ಟೈಲ್ ಕುಸ್ತಿಯಲ್ಲಿ ಕಂಚು ಜಯಿಸಿದ್ದರು. ಕಂಚಿನ ಪದಕಕ್ಕಾಗಿ ನಡೆದ ಟೆಕ್ನಿಕಲ್ ಸುಪೀರಿಯರ್ ಕುಸ್ತಿ ಸ್ಪರ್ಧೆಯಲ್ಲಿ ದಿವ್ಯಾ ಅವರು ಚೈನೀಸ್ ತೈಪೆಯ ಚೆನ್ ವೆನ್ಲಿಂಗ್ ಅವರನ್ನು 10-0ಯಿಂದ ಕೆಡವಿ ಕಂಚಿನ ಪದಕ ತನ್ನದಾಗಿಸಿಕೊಂಡಿದ್ದರು.

logoblog

Thanks for reading Asian Games 2018: A brief summary of everyone who won the medal for India.

Previous
« Prev Post

No comments:

Post a Comment

Recent Posts